ಅಕ್ಷರ

Jump to navigation Jump to search
ಅಕ್ಕರ ಇಲ್ಲಿ ಪುನರ್ನಿರ್ದೇಶಿಸುತ್ತದೆ. ವಿದ್ಯೆ ಲೇಖನಕ್ಕಾಗಿ ಇಲ್ಲಿ ನೋಡಿ.

ಅಕ್ಷರಮಾಲೆಯಲ್ಲಿ ಬರವಣಿಗೆಯ ರೂಪದಲ್ಲಿರುವ ಒಂದು ಲಿಖಿತ ಅಂಶವೇ ಅಕ್ಷರ.[೧] ಅಕ್ಷರಗಳು ಬಿಡಿಬಿಡಿಯಾಗಿರುತ್ತವೆ. ವಾಕ್ಯವೊಂದರಲ್ಲಿ ಹಲವಾರು ಪದಗಳಿರುತ್ತವೆ. ಪದವೊಂದರಲ್ಲಿ ಒಂದಕ್ಕಿಂತ ಹೆಚ್ಚು ಅಕ್ಷರಗಳಿರುತ್ತವೆ. ಅವುಗಳು ಸ್ವರ ಅಥವಾ ವ್ಯಂಜನ ಅಕ್ಷರಗಳಾಗಿರಬಹುದು. ಪದವು ಸ್ವರದಿಂದ ಅಥವಾ ವ್ಯಂಜನ ಅಕ್ಷರಗಳಿಂದ ಆರಂಭವಾಗುತ್ತದೆ. ಪ್ರತಿಯೊಂದು ಅಕ್ಷರಗಳು ಒಂದೊಂದು ಸಂಕೇತಗಳು. ಈ ಸಂಕೇತಗಳು ಆಯಾ ಭಾಷೆಯ ಲಿಪಿಗೆ ಅನುಗುಣವಾಗಿ ಬಳಕೆಯಾಗುತ್ತದೆ. ಪ್ರತಿಯೊಂದು ಅಕ್ಷರವನ್ನು ಒಂದು ಧ್ವನಿ ಎಂದು ಕರೆಯುತ್ತಾರೆ. ಹಾಗಾಗಿ ಅಕ್ಷರಮಾಲೆಯ ಪ್ರತಿಯೊಂದು ಅಕ್ಷರಗಳೂ ಒಂದೊಂದು ಧ್ವನಿಮಾಗಳಾಗುತ್ತವೆ. ಅಕ್ಷರವು ವಾಕ್ಯವೊಂದರ ಅತ್ಯಂತ ಕನಿಷ್ಟತಮ ಘಟಕವೂ ಆಗಬಹುದು. ಉದಾ: ಎಂದರೆ ಆ ಮನೆ. ಇಲ್ಲಿ ಅಕ್ಷರ ಒಂದು ಕನಿಷ್ಟತಮ ಘಟಕವೂ ಹೌದು. ಹಾಗೇನೆ ಅಕ್ಷರವು ಒಂದು ಪದದ ಸ್ಥಾನವನ್ನು ಹೊಂದುತ್ತದೆ.

ಅಕ್ಷರ ಪದನಿಷ್ಪತ್ತಿ

ಕ್ಷರ ಎಂದರೆ ಕ್ಷಯವಾಗು, ನಾಶವಾಗು, ಕ್ಷಯಿಸು, ಮುಗಿಯು ಎಂಬ ಅರ್ಥವನ್ನು ಹೊಂದಿದೆ. ಅ+ಕ್ಷರ ಎಂದಾಗ ನಾಶವಾಗದ, ಕ್ಷಯಿಸಲಾಗದ ಎಂಬ ಅರ್ಥವನ್ನು ಪಡೆದುಕೊಳ್ಳುತ್ತದೆ.

ಅಕ್ಷರ ಪದದ ಬಳಕೆ

ಯಾವುದೇ ಅಕ್ಷರ, ಅಕ್ಷರ ಅಳವಡಿಸು, ದಪ್ಪ ಅಕ್ಷರ, ದೊಡ್ಡ ಅಕ್ಷರ, ಬೀಡಿ ಅಕ್ಷರ, ಸ್ಪಷ್ಟ ಅಕ್ಷರ, ಅಕ್ಷರ ಸ್ಥಿತಿ ಸೂಕ್ಷ್ಮ, ಅಕ್ಷರ ಎಂದರೆ ಫಾಂಟ್, ಅಕ್ಷರ ರೂಪ, ಅಕ್ಷರ ಸ್ವರೂಪ, ಅಕ್ಷರ ನಕಾಶೆ, ಅಕ್ಷರ ಗಣ, ಅಕ್ಷರ ಸಮೂಹ, ಅಕ್ಷರ ಅಭ್ಯಾಸ[೨] ಇತ್ಯಾದಿ.

ವ್ಯಾಖ್ಯಾನ

ಅಕ್ಷರ' ವೆಂದರೆ ವರ್ಣಮಾಲೆಯಲ್ಲಿ ಬಿಂಬಿಸುವ ಬರವಣಿಗೆಯ ರೂಪದಲ್ಲಿರುವ ಒಂದು ಅಥವಾ ಜಾಸ್ತಿ ಶಬ್ದಗಳನ್ನು ಸ್ಫುರಿಸುವ ಒಂದು ಸಂವಹನೆಯ ಮಾಧ್ಯಮ. ಪ್ರತಿಯೊಂದು ಅಕ್ಷರವೂ ಒಂದು ಭಾಷೆಯಲ್ಲಿರುವ ವಿವಿಧ ಪದಗಳನ್ನು ಉಚ್ಚರಿಸುವ ವಿಧಾನಗಳನ್ನು ತಿಳಿಸುತ್ತದೆ. ಅಕ್ಷರವು ಬರವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬಾಹ್ಯ ಕೊಂಡಿ

  1. https://en.wikipedia.org/wiki/Alphabet
  2. https://en.wiktionary.org/wiki/fant

ಉಲ್ಲೇಖ

  1. http://www.kuvempu.com/lnt3.html
  2. http://vijaykarnataka.indiatimes.com/religion/astro/-/articleshow/17708769.cms
"https://kn.wikipedia.org/w/index.php?title=ಅಕ್ಷರ&oldid=741438" ಇಂದ ಪಡೆಯಲ್ಪಟ್ಟಿದೆ
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.