ಅಧಿವಾಹಕತೆ

Jump to navigation Jump to search
ತೇಲುವ ಅಯಸ್ಕಾಂತ
SchriesheimReagan Superconductivity

ವಸ್ತುಗಳು ಶೂನ್ಯ ಪ್ರತಿರೋಧತೆಯೊಂದಿಗೆ (zero resistance )ವಾಹಕತೆಯನ್ನು ಪ್ರದರ್ಶಿಸಿದಾಗ ಅದನ್ನು ಅಧಿವಾಹಕಗಳು (superconductors)ಎಂದು ಕರೆಯುತ್ತಾರೆ . ಈ ಪ್ರಕ್ರಿಯೆಗೆ ಅಧಿವಾಹಕತೆ(superconductivity) ಎಂದು ಕರೆಯುತ್ತಾರೆ. ವಸ್ತುಗಳ ತಾಪವನ್ನು ನಿರ್ಣಾಯಕ ತಾಪಕ್ಕಿಂತ (critical temperature)ಕಡಿಮೆಗೊಳಿಸಿದಾಗ ಶೂನ್ಯ ಪ್ರತಿರೋಧತೆಯೊಂದಿಗೆ (zero resistance ) ವಾಹಕಗಳಲ್ಲಿನ ಕಾಂತೀಯ ಕ್ಷೇತ್ರಗಳ ಉಪಸ್ಥಿತಿಯು ಕಾಣೆಯಾಗಿ ಅತ್ಯುನ್ನತ ಮಟ್ಟದ ವಾಹಕತ್ವವನ್ನು ಪ್ರದರ್ಶಿಸುವುದೇ ಅಧಿವಾಹಕತೆ.ಅಧಿವಾಹಕಗಳು ಕಡಿಮೆ ಪ್ರಮಾಣದ ಶಕ್ತಿಯ ಅಪವ್ಯಯವನ್ನು ಹೊಂದಿರುತ್ತವೆ. ಈ ಪ್ರಕ್ರಿಯೆಯನ್ನು ಹಾಲೆಂಡಿನ (ಈಗಿನ ನೆದರ್ಲ್ಯಾಂಡ್) ನ ಪ್ರಸಿದ್ಧ ವಿಜ್ಞಾನಿ ಹೆಚ್ ಕೆಮರ್ಲಿಂಗ್ ಓನ್ಸ ಎಂಬುವವನು ಲೀಡೆನ್ ಎಂಬಲ್ಲಿ 1911ಏಪ್ರಿಲ್ 8ರಂದು ಕಂಡುಹಿಡಿದನು . ಲೋಹೀಯ ವಾಹಕಗಳ ತಾಪ ಕಡಿಮೆಯಾದಂತೆ ಅವುಗಳ ರೋಧತೆಯ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಇದರಿಂದ ಅವುಗಳು ಹೆಚ್ಚು ವಿದ್ಯುತ್ ನ್ನು ತಮ್ಮ ಮೂಲಕ ಹರಿಯಲು ಬಿಡುತ್ತವೆ . ಆದರೂ ತಾಮ್ರ ಮತ್ತು ಬೆಳ್ಳಿಯಂತಹ ವಾಹಕಗಳಲ್ಲಿ ಇಂಪ್ಯೂರಿಟಿ ಗಳ ಉಪಸ್ಥಿತಿಯಿಂದಾಗಿ ಅವು ಶೂನ್ಯ ರೋಧತೆಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಆದರೆ ಅಧಿವಾಹಕಗಳು (superconductors)ಈ ಮಿತಿಯನ್ನು ಹೊಂದಿರುವುದಿಲ್ಲ. ಏಕೆಂದರೆ ನಿರ್ಣಾಯಕ ತಾಪಮಾನಕ್ಕಿಂತ(critical temperature) ಅವುಗಳ ತಾಪ ಕಡಿಮೆಯಾದಂತೆ ವಾಹಕಗಳು ಅಧಿವಾಹಕಗಳಂತೆ(superconductors) ವರ್ತಿಸಲು ಪ್ರಾರಂಭಿಸುತ್ತವೆ .[೧][೨][೩][೪]

ಅಧಿವಾಹಕತೆಯ ಪ್ರಯೋಜನಗಳು[[೫]]

ಅಧಿವಾಹಕತೆಯ ಅಯಸ್ಕಾಂತಗಳು ತುಂಬಾ ಶಕ್ತಿಶಾಲಿಯಾದ ವಿದ್ಯುತ್ಕಾಂತಗಳು. ಹಾಗಾಗಿ ಇದನ್ನು MRI/NMR ರೋಹಿತ (spectrometers)[[೬]] ಗಳಲ್ಲಿ ಹಾಗೂ ಕಣ ವೇಗವರ್ಧಕಗಳಲ್ಲಿ (particle accelerators)[[೭]][[೮]] ಬಳಸುತ್ತಾರೆ.

ಉಲ್ಲೇಖ

  1. John Bardeen; Leon Cooper; J. R. Schriffer (December 1, 1957). "Theory of Superconductivity". Physical Review. 8 (5): 1178. Bibcode:1957PhRv..108.1175B. doi:10.1103/physrev.108.1175. ISBN 9780677000800. Retrieved June 6, 2014.  reprinted in Nikolaĭ Nikolaevich Bogoliubov (1963) The Theory of Superconductivity, Vol. 4, CRC Press, ISBN 0677000804, p. 73
  2. John Daintith (2009). The Facts on File Dictionary of Physics (4th ed.). Infobase Publishing. p. 238. ISBN 1438109490. 
  3. John C. Gallop (1990). SQUIDS, the Josephson Effects and Superconducting Electronics. CRC Press. pp. 3, 20. ISBN 0-7503-0051-5. 
  4. Durrant, Alan (2000). Quantum Physics of Matter. CRC Press. pp. 102–103. ISBN 0750307218. 
  5. https://en.wikipedia.org/wiki/Superconductivity
  6. https://en.wikipedia.org/wiki/Mass_spectrometry
  7. https://en.wikipedia.org/wiki/Particle_accelerator
  8. https://www.google.co.in/search?q=particle+accelerator&ie=utf-8&oe=utf-8&gws_rd=cr&ei=MtzBVLntLMf6mQWUhYHwCQ


The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.