ಎಸ್.ಎಂ.ಕೃಷ್ಣ

Jump to navigation Jump to search
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
ಎಸ್.ಎಂ.ಕೃಷ್ಣ


ಅಧಿಕಾರದ ಅವಧಿ
೨೩ ಮೇ ೨೦೦೯ – ೨೮ ಅಕ್ಟೊಬರ್ ೨೦೧೨
ಪೂರ್ವಾಧಿಕಾರಿ ಪ್ರಣಬ್ ಮುಖೆರ್ಜೀ
ಉತ್ತರಾಧಿಕಾರಿ ಸಲ್ಮಾನ್ ಖುರ್ಶಿದ್

ಅಧಿಕಾರದ ಅವಧಿ
೧೨ ಡಿಸೆಂಬರ್ ೨೦೦೪ – ೫ ಮಾರ್ಚ್ ೨೦೦೮
ಪೂರ್ವಾಧಿಕಾರಿ ಮೊಹಮ್ಮದ್ ಫಜಲ್
ಉತ್ತರಾಧಿಕಾರಿ ಎಸ್. ಸಿ. ಜಮೀರ್

ಅಧಿಕಾರದ ಅವಧಿ
೧೧ ಅಕ್ಟೋಬರ್ ೧೯೯೯ – ೨೮ ಮೇ ೨೦೦೪
ಪೂರ್ವಾಧಿಕಾರಿ ಜೆ ಹೆಚ್ ಪಟೇಲ್
ಉತ್ತರಾಧಿಕಾರಿ ಧರಂ ಸಿಂಗ್

ಜನನ ೧ ಮೇ ೧೯೩೨
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ (೨೦೧೭ ಮಾರ್ಚ್ ನಂತರ)
ಕಾಂಗ್ರೆಸ್(ಜನವರಿ ೨೦೧೭ರ ತನಕ)
ಜೀವನಸಂಗಾತಿ ಪ್ರೇಮಾ ಕೃಷ್ಣ

ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಜನನ:೧೯೩೨) ೧೯೯೯ ರಿಂದ ೨೦೦೪ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯು ಸಹ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ ೨೦೧೭ ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪದೆದರು.

ವಿದ್ಯಾಭ್ಯಾಸ

ಎಸ್ ಎಂ ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ಇದರ ನಂತರ ಅಮೆರಿಕದ ಟೆಕ್ಸಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದಿ ನಂತರ ವಾಷಿಂಗ್ಟನ್ ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದರು.

ರಾಜಕೀಯ ಜೀವನ

ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ನ್ಯಾಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ವಿಧಾನ ಸಭೆಗೆ ಮೊದಲ ಬಾರಿ ೧೯೬೨ ರಲ್ಲಿ ಚುನಾಯಿತರಾದರು. ೧೯೬೮ರಲ್ಲಿ ಲೋಕಸಭೆಗೆ ಚುನಾಯಿತರಾದರು. ೧೯೭೧ರಲ್ಲಿ ಅಲ್ಲಿಗೆ ಮರು ಚುನಾಯಿತರಾಗಿ ಮತ್ತೆ ೧೯೭೨ ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. ೧೯೮೩ರಲ್ಲು ಉದ್ಯಮ ಖಾತೆ ಮತ್ತು ೧೯೮೪ ರಲ್ಲಿ ವಿತ್ತ ಖಾತೆಯ ಸಚಿವರಾದರು. ೧೯೮೯ ರಿಂದ ೧೯೯೨ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾದರು. ೧೯೯೨ ರಿಂದ ೧೯೯೪ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಗಳಾದರು. ೧೯೯೬ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಕೃಷ್ಣ, ೧೯೯೯ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ೧೯೯೯ರಿಂದಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದರು. ವಿದೇಶಗಳಲ್ಲಿ ಎರಡು ಬಾರಿ (ವಿಶ್ವಸಂಸ್ಥೆಯಲ್ಲಿ ಒಮ್ಮೆ, ಮತ್ತು ಕಾಮನ್ ವೆಲ್ತ್ ಒಕ್ಕೂಟದಲ್ಲಿ ಒಮ್ಮೆ) ಭಾರತವನ್ನು ಪ್ರತಿನಿಧಿಸಿದ್ದಾರೆ.

ಎಸ್.ಎಂ.ಕೃಷ್ಣ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

  • ಜನವರಿ 28 2017ಬೆಳಿಗ್ಗೆ 11 ಗಂಟೆಗೆ ಎಸ್.ಎಂ.ಕೃಷ್ಣ ಅಧಿಕೃತವಾಗಿ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. [೧]
  • 29 Jan, 2017:ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾ ಗೋಷ್ಠಿ ನಡೆಸಿ ‘ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಿದ್ದೇನೆ’ ಎಂದು ಎಸ್‌. ಎಂ. ಕೃಷ್ಣ ಅಧಿಕೃತವಾಗಿ ಘೋಷಣೆ ಮಾಡಿದರು.ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ಟಿ.ವಿ.ನೈನ್ ವರದಿ ಮಾಡಿದೆ.[೨][೩]


  1. ಕಾಂಗ್ರೆಸ್‌ನಲ್ಲಿ ಹಿರಿತನ, ಆತ್ಮಗೌರವಕ್ಕೆ ಬೆಲೆ ಕಾಣಿಸದೆ ಇದ್ದುದರಿಂದ ಪಕ್ಷ ತ್ಯಜಿಸುತ್ತಿದ್ದೇನೆ’ : ಕೃಷ್ಣ
  2. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ನಿವೃತ್ತಿ
  3. ಸಂಗತ;ಕೃಷ್ಣ ಅವರಿಗೆ ಬಹಿರಂಗ ಪತ್ರ;ಟಿ.ಕೆ. ತ್ಯಾಗರಾಜ್;2 Feb, 2017
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.