ಗಣರಾಜ್ಯೋತ್ಸವ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗಣರಾಜ್ಯ ದಿನದ ಮೆರವಣಿಗೆ
ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ಪಡೆದುಕೊಂಡಿರುವ ದೇಶಗಳು. ಯುಗೊಸ್ಲಾವಿಯ ದೇಶವನ್ನು ಎರಡು ಬಾರಿ ಆಮಂತ್ರಿಸಲಾಗಿದೆ, ಆದರೆ ಇಲ್ಲಿ ಅದನ್ನು ಗುರುತಿಸಲಾಗಿಲ್ಲ.
ಭಾರತದ ಮೊದಲ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಕುದುರೆ ಸಾರೋಟಿನಲ್ಲಿ ಕರೆತಂದ ದೆಹಲಿಯ ರಾಜಪಥದಲ್ಲಿ ಕರೆತಂದ ದೃಶ್ಯ.

ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸ೦ವಿಧಾನ ಜಾರಿಗೆ ಬ೦ದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದುಂಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ.

ಇತಿಹಾಸ

ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಎರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು.ನವೆಂಬರ್೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೨೯ ರಂದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ ದಿನದ೦ದೇ ಜಾರಿಗೆ ತರಲಾಯಿತು.

ಚಿತ್ರ ಸಂಗ್ರಹ

ಮುಖ್ಯ ಅತಿಥಿ

ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ.

ವರ್ಷ ಮುಖ್ಯ ಅತಿಥಿ ದೇಶ
೧೯೫೦ ಅಧ್ಯಕ್ಷರು ಸುಕಾರ್ನೊ ಇ೦ಡೋನೇಷ್ಯಾ
೧೯೫೪ ಕಿ೦ಗ್ ಜಿಗಮೆ ದೊರ್ಜಿ ವಾ೦ಗಚಕ್ ಭೂತಾನ್
೧೯೫೫ ಗವನ೯ರ್ ಜನರಲ್ ಮಲ್ಲಿಕ್ ಗುಲಾಮ್ ಮೊಹಮ್ಮದ್ ಪಾಕಿಸ್ತಾನ
೧೯೫೮ ಮಾಷ೯ಲ್ ಯೆ ಜಿನ್ ಯಿ೦ಗ್ ಚೀನಾ
೧೯೬೦ ಪ್ರಧಾನ ಮ೦ತ್ರಿ ಕ್ಲೈಮ೦ಟ್ ವೊರೊಸಿಲ್ವೊ ಸೊವಿಯತ್ ಯುನಿಯನ್
೧೯೬೧ ರಾಣಿ ಎಲಿಜಾಬೆತ್ ಯುನ್ಯಟೆಡ್ ಕಿ೦ಗಡಮ್
೧೯೬೩ ಕಿ೦ಗ್ ನೊರೊಡೊಮ್ ಸಿನೌಕ್ ಕಾ೦ಬೊಡಿಯಾ
೧೯೭೬ ಪ್ರಧಾನ ಮಂತ್ರಿ ಜಾಕ್ಸ್ ಚಿರಾಕ್ ಫ್ರಾನ್ಸ್
೧೯೭೮ ರಾಷ್ಟ್ರಪತಿ ಡಾ. ಪ್ಯಾಟ್ರಿಕ್ ಹಿಲ್ಲರಿ Republic of Ireland ಐರ್ಲ್ಯಾಂಡ್
೧೯೮೬ ಪ್ರಧಾನ ಮಂತ್ರಿ ಆಂಡ್ರಿಯಾಸ್ ಪಪನ್ಡರ್ಯೂ ಗ್ರೀಸ್ ಗ್ರೀಸ್
೧೯೯೨ ರಾಷ್ಟ್ರಪತಿ ಮಾರಿಯೊ ಸೋರೆಸ್ Portugal ಪೋರ್ಚುಗಲ್
೧೯೯೫ ರಾಷ್ಟ್ರಪತಿ ನೆಲ್ಸನ್ ಮಂಡೇಲ[೧] ದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕ
೧೯೯೬ ರಾಷ್ಟ್ರಪತಿ ಡಾ. ಫರ್ನ್ಯಾನ್ಡೋ ಹೆನ್ರಿಕ್ ಕಾರ್ದೊಸೊ ಬ್ರೆಜಿಲ್ ಬ್ರೆಜಿಲ್
೧೯೯೭ ಪ್ರಧಾನ ಮಂತ್ರಿ ಬಸ್ದಿಯೊ ಪಾಂಡೆ ಟ್ರಿನಿಡಾಡ್ ಮತ್ತು ಟೊಬೆಗೊ ಟ್ರಿನಿಡಾಡ್ ಮತ್ತು ಟೊಬೆಗೊ
೧೯೯೮ ರಾಷ್ಟ್ರಪತಿ ಜಾಕ್ಸ್ ಚಿರಾಕ್ ಫ್ರಾನ್ಸ್
೧೯೯೯ ರಾಜ ಬೀರೇದ್ರ ಬೀರ್ ಬಿಕ್ರಮ್ ಶಾಹ್ ದೇವ್ Nepal ನೇಪಾಲ
೨೦೦೦ ರಾಷ್ಟ್ರಪತಿ ಒಲೆಸುಗುನ್ ಒಬಸಾಂಜೊ ನೈಜೀರಿಯ ನೈಜೀರಿಯ
೨೦೦೧ ರಾಷ್ಟ್ರಪತಿ ಅಬ್ದೆಲ್‌ಅಜೀಜ್ ಬೌತೆಫ್ಲಿಕ Algeria ಅಲ್ಜೀರಿಯ
೨೦೦೨ ರಾಷ್ಟ್ರಪತಿ ಕಸ್ಸಮ್ ಉತೀಮ್ Mauritius ಮಾರಿಷಸ್
೨೦೦೩ ರಾಷ್ಟ್ರಪತಿ ಮೊಹಮ್ಮದ್ ಖಾತಾಮಿ  Iran
೨೦೦೪ ರಾಷ್ಟ್ರಪತಿ ಲುಯಿಜ್ ಇನಾಸಿಒ ಲುಲ ಡ ಸಿಲ್ವ ಬ್ರೆಜಿಲ್ ಬ್ರೆಜಿಲ್
೨೦೦೫ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ Bhutan ಭೂತಾನ್
೨೦೦೬ ರಾಜ ಅಬ್ದುಲ್ಲಹ್ ಬಿನ್ ಅಬ್ದುಲ್‌ಅಜೀಜ್ ಅಲ್-ಸೌದ್ Saudi Arabia ಸೌದಿ ಅರೇಬಿಯ
೨೦೦೭ ರಾಷ್ಟ್ರಪತಿ ವ್ಲಾದಿಮಿರ್ ಪುತಿನ್  Russia
೨೦೦೮ ರಾಷ್ಟ್ರಪತಿ ನಿಕೊಲಸ್ ಸಾರ್ಕೋಜಿ ಫ್ರಾನ್ಸ್
೨೦೦೯ ರಾಷ್ಟ್ರಪತಿ ನೂರ್ಸುಲ್ತಾನ್ ನಜರ್ಬಯೇವ್ ಕಝಕಿಸ್ತಾನ್
೨೦೧೦ ರಾಷ್ಟ್ರಪತಿ ಲೀ ಮ್ಯೂಂಗ್ ಬಕ್ ದಕ್ಷಿಣ ಕೊರಿಯ
೨೦೧೧ ರಾಷ್ಟ್ರಪತಿ ಸುಸಿಲೊ ಬಂಬಾಂಗ್ ಯುಧೊಯೊನೊ ಇಂಡೋನೇಷ್ಯಾ
೨೦೧೨ ರಾಷ್ಟ್ರಪತಿ ಯಿಂಗ್ಲುಕ್ ಶಿನಾವತ್ರ ಥೈಲ್ಯಾಂಡ್
೨೦೧೩ ರಾಜ ಜಿಗ್ಮೆ ವಾಂಗ್‍ಚುಕ್ ಭೂತಾನ್
೨೦೧೪ ಪ್ರಧಾನ ಮಂತ್ರಿ ಶಿಂಜೊ ಅಬೆ ಜಪಾನ್
೨೦೧೫ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮ ಅಮೆರಿಕ ಸಂಯುಕ್ತ ಸಂಸ್ಥಾನಗಳು
೨೦೧೬ ರಾಷ್ಟ್ರಾಧ್ಯಕ್ಷ. ಪ್ರಾನ್ಸಿಸ್ಕೊ ಹೊಲೆಂಡ್ ಫ್ರಾನ್ಸ್
೨೦೧೭ ಯುವರಾಜ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಸಂಯುಕ್ತ ಅರಬ್ ಸಂಸ್ಥಾನ

ಇದನ್ನೂ ನೋಡಿ

ಉಲ್ಲೇಖಗಳು

  1. "General South African History timeline" sahistory.org.za Accessed on June 13, 2008 .
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.