ನದೀಮುಖ

Jump to navigation Jump to search
ನದೀಮುಖ

ನದೀಮುಖವು ಒಂದು ಭಾಗಶಃ ಸುತ್ತುವರಿಯಲ್ಪಟ್ಟ ಉಪ್ಪು ನೀರಿನ ಕರಾವಳಿ ಕಾಯ. ಇದರೊಳಗೆ ಒಂದು ಅಥವಾ ಹೆಚ್ಚು ನದಿಗಳು ಅಥವಾ ತೊರೆಗಳು ಹರಿಯುತ್ತವೆ, ಮತ್ತು ಇದು ಮುಕ್ತ ಸಮುದ್ರಕ್ಕೆ ಜೋಡಣೆಗೊಂಡಿರುತ್ತದೆ.[೧]

ನದೀಮುಖಗಳು ನದಿ ಪರಿಸರಗಳು ಮತ್ತು ಕಡಲ ಪರಿಸರಗಳ ನಡುವೆ ಒಂದು ಸಂಕ್ರಮಣ ವಲಯವನ್ನು ರಚಿಸುತ್ತವೆ. ಇವು (ಉಬ್ಬರವಿಳಿತಗಳು, ಅಲೆಗಳು ಹಾಗೂ ಉಪ್ಪು ನೀರಿನ ಒಳಹರಿವಿನಂತಹ) ಕಡಲ ಪ್ರಭಾವಗಳು ಮತ್ತು (ಸಿಹಿನೀರು ಮತ್ತು ಕೆಸರಿನ ಹರಿವಿನಂತಹ) ನದಿ ಪ್ರಭಾವಗಳು ಎರಡಕ್ಕೂ ಒಳಪಟ್ಟಿರುತ್ತವೆ. ಉಪ್ಪುನೀರು ಮತ್ತು ಸಿಹಿನೀರು ಎರಡರ ಒಳಹರಿವುಗಳು ಜಲಸ್ತಂಭ ಮತ್ತು ಕೆಸರು ಎರಡರಲ್ಲೂ ಉನ್ನತ ಪ್ರಮಾಣದ ಪೋಷಕಾಂಶಗಳನ್ನು ಒದಗಿಸುತ್ತವೆ. ಹಾಗಾಗಿ ನದೀಮುಖಗಳು ವಿಶ್ವದ ಅತ್ಯಂತ ಫಲವತ್ತಾದ ನೈಸರ್ಗಿಕ ಆವಾಸಸ್ಥಾನಗಳಲ್ಲಿ ಒಂದೆನಿಸಿವೆ.

ಅಸ್ತಿತ್ವದಲ್ಲಿರುವ ಬಹುತೇಕ ನದೀಮುಖಗಳು ಹೋಲೋಸೀನ್ ಯುಗದ ಅವಧಿಯಲ್ಲಿ ರೂಪಗೊಂಡವು. ಈ ಅವಧಿಯಲ್ಲಿ ಅಂದರೆ ಸುಮಾರು ೧೦,೦೦೦-೧೨,೦೦೦ ವರ್ಷಗಳಷ್ಟು ಹಿಂದೆ ಸಮುದ್ರದ ಮಟ್ಟ ಏರಲು ಶುರುವಾದಾಗ ನದಿ ಸವೆತದ ಅಥವಾ ಹಿಮದಿಂದ ಸ್ವಚ್ಛಗೊಂಡ ಕಣಿವೆಗಳು ಪ್ರವಾಹಗಳಿಗೊಳಗಾಗಿ ನದೀಮುಖಗಳ ರಚನೆಯಾಯಿತು. ನದೀಮುಖಗಳನ್ನು ವಿಶಿಷ್ಟವಾಗಿ ಅವುಗಳ ಭೂರೂಪಶಾಸ್ತ್ರ ಸಂಬಂಧಿ ಲಕ್ಷಣಗಳು ಅಥವಾ ಜಲ ಪರಿಚಲನಾ ಮಾದರಿಗಳ ಪ್ರಕಾರ ವರ್ಗೀಕರಿಸಲಾಗುತ್ತದೆ. ಅವು ಅನೇಕ ವಿಭಿನ್ನ ಹೆಸರುಗಳನ್ನು ಹೊಂದಿರಬಹುದಾದರೂ (ಉದಾ. ಕೊಲ್ಲಿಗಳು, ಬಂದರುಗಳು, ಲಗೂನ್‍ಗಳು, ಖಾರಿಗಳು, ಅಥವಾ ಜಲಸಂಧಿಗಳು), ಇವುಗಳಲ್ಲಿ ಕೆಲವು ಜಲಕಾಯಗಳು ಮೇಲಿನ ನದೀಮುಖದ ವ್ಯಾಖ್ಯಾನವನ್ನು ಕಟ್ಟುನಿಟ್ಟಾಗಿ ಪೂರೈಸುವುದಿಲ್ಲ ಮತ್ತು ಸಂಪೂರ್ಣವಾಗಿ ಉಪ್ಪಾಗಿರಬಹುದು.

ಅನೇಕ ನದೀಮುಖಗಳ ತೀರಗಳು ವಿಶ್ವದ ಅತ್ಯಂತ ಜನದಟ್ಟಣೆಯ ಪ್ರದೇಶಗಳ ಪೈಕಿ ಇವೆ. ವಿಶ್ವದ ಸುಮಾರು ೬೦ ಶೇಕಡ ಜನಸಂಖ್ಯೆ ನದೀಮುಖಗಳು ಮತ್ತು ಕರಾವಳಿ ಉದ್ದಕ್ಕೂ ಇದೆ. ಪರಿಣಾಮವಾಗಿ, ಅನೇಕ ನದಿಮುಖಗಳು ಅನೇಕ ಅಂಶಗಳಿಂದ, ಅರಣ್ಯನಾಶದಿಂದ ಮಣ್ಣಿನ ಸವಕಳಿಯಿಂದಾಗುವ ಶೇಖರಣೆ, ಅತಿ ಮೇಯಿಸುವಿಕೆ, ಮತ್ತು ಇತರ ಕಳಪೆ ಕೃಷಿ ಪದ್ಧತಿಗಳು; ಅತಿ ಮೀನುಗಾರಿಕೆ; ಬರಿದಾಗಿಸುವಿಕೆ ಮತ್ತು ಜೌಗುಭೂಮಿಗಳ ತುಂಬಿಸುವಿಕೆ; ಕೊಚ್ಚೆ ಮತ್ತು ಪ್ರಾಣಿ ತ್ಯಾಜ್ಯಗಳಿಂದ ಹೆಚ್ಚಿನ ಪೋಷಕಾಂಶಗಳ ಕಾರಣದಿಂದ ಅತಿ ಫಲವತ್ತಾಗಿರುವಿಕೆ; ಕೊಚ್ಚೆ ಪ್ರವೇಶ್ಯಗಳಿಂದ ಸೇರುವ ಮಾಲಿನ್ಯಕಾರಕಗಳು (ಉದಾ. ಭಾರ ಲೋಹಗಳು, ಹೈಡ್ರೊಕಾರ್ಬನ್‍ಗಳು); ಪ್ರವಾಹ ನಿಯಂತ್ರಣ ಅಥವಾ ನೀರನು ಬೆರೆಡೆ ತಿರುಗಿಸುವುದಕ್ಕಾಗಿ ಒಡ್ಡುಗಳು ಅಥವಾ ಅಣೆಕಟ್ಟುಗಳು ಸೇರಿದಂತೆ ಸವೆತಕ್ಕೆ ಒಳಗಾಗುತ್ತವೆ.

ನದೀಮುಖಗಳು ದೊಡ್ಡ ಸಂಖ್ಯೆಯ ಜೀವಿಗಳಿಗೆ ಆವಾಸಸ್ಥಾನಗಳನ್ನು ಒದಗಿಸುತ್ತವೆ ಮತ್ತು ಬಹಳ ಹೆಚ್ಚು ಉತ್ಪಾದಕತೆಗೆ ಆಧಾರ ನೀಡುತ್ತವೆ. ವಿಶ್ವದಲ್ಲಿ ಅವುಗಳ ಸ್ಥಳಗಳನ್ನು ಆಧರಿಸಿ, ನದೀಮುಖಗಳು ಅನೇಕ ಮೀನಿನ ನರ್ಸರಿಗಳಿಗೆ ಆವಾಸಸ್ಥಾನಗಳನ್ನು ಒದಗಿಸುತ್ತವೆ, ಉದಾ. ಸ್ಯಾಲ್ಮನ್ ಮತ್ತು ಸೀ ಟ್ರೌಟ್.

ಉಲ್ಲೇಖಗಳು

  1. Pritchard, D. W. (1967). "What is an estuary: physical viewpoint". In Lauf, G. H. Estuaries. A.A.A.S. Publ. 83. Washington, DC. pp. 3–5. 
"https://kn.wikipedia.org/w/index.php?title=ನದೀಮುಖ&oldid=809596" ಇಂದ ಪಡೆಯಲ್ಪಟ್ಟಿದೆ
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.