ಪದ

Jump to navigation Jump to search

ಭಾಷಾಶಾಸ್ತ್ರದಲ್ಲಿ, ಲಾಕ್ಷಣಿಕ ಅಥವಾ ಲೌಕಿಕ ವಿಷಯಕ್ಕೆ ಸಂಬಂಧಿಸಿ ಪ್ರತ್ಯೇಕವಾಗಿ ಉಚ್ಚರಿಸುವ ಒಂದು ಚಿಕ್ಕ ಘಟಕ ಪದ. ಇದನ್ನು ಅಕೃತಿಮಾವೆಂದು ಗುರುತಿಸಬಹುದು. ಪದವು ಆಳವಾಗಿ ವಿಭಿನ್ನತೆಯನ್ನು ಹೊಂದಿರುತ್ತದೆ. ಒಂದು ಪದ ಒಂದೇ ಕನಿಷ್ಠ ಪದಘಟಕವನ್ನು ಹೊಂದಿರುತ್ತದೆ. ಉದಾ: ಬಾ, ಓಹ್ !, ಕೆಂಪು, ತ್ವರಿತ, ಓಡು ಇತ್ಯಾದಿ. ಒಂದಕ್ಕಿಂತ ಹೆಚ್ಚು ಪದಗಳು ಬಂದಾಗ ಅವುಗಳು ಕನಿಷ್ಠತಮ ಘಟಕದಲ್ಲಿರುವ ಅರ್ಥವನ್ನು ಕಳೆದುಕೊಂಡು ಸಂಕೀರ್ಣ ಪದಗಳಾಗುತ್ತವೆ. ಉದಾ: ಬಂಡೆಗಳು, ತ್ವರಿತವಾಗಿ, ಚಾಲನೆಯಲ್ಲಿರುವ, ಅನಿರೀಕ್ಷಿತ ಇತ್ಯಾದಿ.

  • ಹಲವು ಸಂಕೀರ್ಣ ಪದಗಳು ಒಳಗೊಂಡ ಒಂದು ವಾಕ್ಯವು ಸಂಕೀರ್ಣ ವಾಕ್ಯವಾಗುತ್ತದೆ, ಉದಾ: ನೀನು ಬಾ. ಇದೊಂದು ಸರಳ ವಾಕ್ಯ.
  • ಒಂದು ವಾಕ್ಯಕ್ಕೆ ಇನ್ನಷ್ಟು ಪದಗಳು ಸೇರಿದಾಗ ಸಂಕೀರ್ಣ ವಾಕ್ಯ ನಿರ್ಮಾಣವಾಗುತ್ತದೆ. ಉದಾ: ನೀನು ನಾಳೆ ಬೆಳಿಗ್ಗೆ ಒಬ್ಬನೆ ನಮ್ಮ ಹೊಸ ಮನೆಗೆ ಬಾ ಹೀಗೆ ಹಲವಾರು ಪದಗಳು ಜೊತೆಸೇರಿ ಸಂಕೀರ್ಣ ವಾಕ್ಯವೊಂದರ ರಚನೆಯೂ ಆಗುತ್ತದೆ.
  • ಮಾತನಾಡುವ ಒಂದು ಪದ ಅಥವಾ ಲಿಖಿತ ಪದವನ್ನು ಶಬ್ದವೆಂದು ಉಲ್ಲೇಖಿಸಬಹುದು. ಅಥವಾ ಕೆಲವೊಮ್ಮೆ ಈ ಎರಡರ ಹಿಂದೆಯೂ ಮರೆಯಾದ ಅಮೂರ್ತವಾದ ಪರಿಕಲ್ಪನೆ ಇರುತ್ತದೆ. ಮಾತುಗಳು ಎಂಬುದು ಧ್ವನಿ ಎಂಬ ಶಬ್ದಗಳ ಘಟಕಗಳಿಂದ ಕೂಡಿವೆ. ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳನ್ನು graphemes ಎಂಬ ಸಂಜ್ಞೆಗಳಲ್ಲಿ ಬರೆಯಲಾಗಿದೆ.

ವ್ಯಾಖ್ಯಾನ

  • ಒಂದು ಭಾಷೆ ಸುಲಭವಾಗಿ ಅಥವಾ ಅಡೆತಡೆಯಿಲ್ಲದೆ ಗ್ರಹಿಸುವ ಅರ್ಥವತ್ತಾದ ಪದಗಳನ್ನು ಅವಲಂಬಭಿಸಿದೆ. ನಿಘಂಟುಗಳು ಒಂದು ಭಾಷೆಯಿಂದ ಲೆಕ್ಷಿಕನ್‍ ಗಳನ್ನು ವರ್ಗೀಕರಿಸಿ ಪದಗಳನ್ನು (ಅಂದರೆ ಆ ಭಾಷೆಯ ಶಬ್ದಕೋಶವನ್ನು) ಸ್ವೀಕರಿಸುತ್ತವೆ. ಬರಹಗಾರರು ತಮ್ಮ ಅಭಿಪ್ರಾಯದಲ್ಲಿ ಭಾಷೆಯ ಪದ"'ಗಳ ಅಂಶಗಳೇನು ಎಂಬ ಸೂಚನೆಯನ್ನು ತೆಗೆದುಕೊಳ್ಳುತ್ತಾರೆ.

ಲಾಕ್ಷಣಿಕ ವ್ಯಾಖ್ಯಾನ

1926 ರಲ್ಲಿ ಲಿಯೊನಾರ್ಡ್ ಬ್ಲೂಮ್ ಎಂಬಾತ ಕನಿಷ್ಟತಮ ಉಚಿತ ನಮೂನೆ (Minimal Free Forms) ಎಂಬ ಪರಿಕಲ್ಪನೆಯನ್ನು ಪರಿಚಯಿಸಿದನು.[೧] ತಮ್ಮಷ್ಟಕ್ಕೆ ತಾವೇ ನಿಂತುಕೊಳ್ಳಲು ಪ್ರಯತ್ನಿಸುವ ಚಿಕ್ಕ ಅರ್ಥಪೂರ್ಣ ಮಾತಿನ ಘಟಕಗಳನ್ನು ಪದಗಳು ಎಂದು ಯೋಚಿಸಲಾಗಿದೆ. ಈ ಪದಗಳು(lexemes) ಶಬ್ದಗಳ (ಅರ್ಥ ಘಟಕಗಳ ಮತ್ತು ಶಬ್ದದ ಘಟಕಗಳ) ಸಂಬಂಧವನ್ನು ತೋರಿಸುತ್ತವೆ.[೨] ಆದಾಗ್ಯೂ ತಮ್ಮನ್ನು ಯಾವುದೇ ಅರ್ಥಗಳ (ಉದಾಹರಣೆಗೆ, ಹಾಗು ಗಳು) ಮೂಲಕ ಬರೆದ ಕೆಲವು ಕನಿಷ್ಠತಮ ಘಟಕಗಳ ರೂಪಗಳು ಅಲ್ಲ.

ಬಾಹ್ಯ ಕೊಂಡಿ

ಉಲ್ಲೇಖ

  1. http://ling.yale.edu/history/leonard-bloomfield
  2. http://www-01.sil.org/linguistics/glossaryoflinguisticterms/WhatIsALexeme.htm
"https://kn.wikipedia.org/w/index.php?title=ಪದ&oldid=642094" ಇಂದ ಪಡೆಯಲ್ಪಟ್ಟಿದೆ
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.