ಬೆಂಗಳೂರು ವಿಜ್ಞಾನ ವೇದಿಕೆ

Jump to navigation Jump to search

ಬೆಂಗಳೂರು ವಿಜ್ಞಾನ ವೇದಿಕೆ : ವೈಜ್ಞಾನಿಕ ಮನೋಭಾವ ಮೂಡಿಸಲು ಮೂಢನಂಬಿಕೆಗಳ ನಿವಾರಣೆಗೆ ಶ್ರಮಿಸಲು ಸುಮಾರು ೫ ದಶಕಗಳಿಂದ ಶ್ರಮಿಸುತ್ತಿರುವವರಲ್ಲಿ ಡಾ. ಎಚ್. ಎನ್ ರವರದು ಪ್ರಮುಖ ಹೆಸರು. ಸಾರ್ವಜನಿಕರಲ್ಲಿ ವೈಜ್ಞಾನಿಕ ಮೂಡಿಸಲು ಹಾಗೂ ವಿಜ್ಞಾನ ವನ್ನು ಜನಪ್ರಿಯಗೊಳಿಸಲು ಬೆಂಗಳೂರಿನಲ್ಲಿನ ಅನೇಕ ಕಾಲೇಜುಗಳ ವಿಜ್ಞಾನ ಸಂಘಗಳು ಕೆಲಸಮಾಡುತ್ತಿದ್ದವು. ಇವುಗಳ ಸೀಮಿತ ಕಾರ್ಯವ್ಯಾಪ್ತಿಗೆ ಪರ್ಯಾಯವಾಗಿ ವರ್ಷವಿಡೀ ಕಾರ್ಯನಿರತವಾಗಿರಬಲ್ಲ ಸಂಘಟನೆಯೊಂದರ ಅಗತ್ಯವನ್ನು ಡಾ. ಎಚ್. ಎನ್. ಮನಗಂಡರು. ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ೧೧, ನವೆಂಬರ್ ೧೯೬೨ ನಲ್ಲಿ ಸಭೆ ನಡೆದಿದ್ದು ಬೆಂಗಳೂರು ವಿಜ್ಞಾನ ವೇದಿಕೆಯನ್ನು ಸ್ಥಾಪಿಸಲು ತೀರ್ಮಾನವಾಯಿತು. ಅಂದು ರೂಪುಗೊಂಡ ಬೆಂಗಳೂರು ವಿಜ್ಞಾನ ವೇದಿಕೆಯ ಧ್ಯೇಯೋದ್ದೇಶಗಳು ಹೀಗಿವೆ.

ಬೆಂಗಳೂರು ವಿಜ್ಞಾನ ವೇದಿಕೆಯ ಧ್ಯೇಯೋದ್ದೇಶಗಳು

 1. ವಿಜ್ಞಾನವನ್ನು ಜನಪ್ರಿಯಗೊಳಿಸುವುದು.
 2. ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು.
 3. ವಿಜ್ಞಾನ ಶಿಕ್ಷಣ ತಂತ್ರಜ್ಞಾನಗಳನ್ನು ಪರಿಚಯಿಸಲು ಉಪನ್ಯಾಸಗಳನ್ನು ಮತ್ತು ಕಾರ್ಯಾಗಾರಗಳನ್ನು ನಡೆಸುವುದು
 4. ವಿಜ್ಞಾನದಲ್ಲಿ ಆಸಕ್ತಿ ಇರುವವರಿಗೆ ಆ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳನ್ನು ಪರಿಚಯಿಸುವುದು.

ಮೇಲ್ಕಂಡ ಆಸಕ್ತಿಗಳನ್ನು ಕಾರ್ಯಗತಗೊಳಿಸಲು ಅನುಸರಿಸಿರುವ ವಿಧಾನಗಳು

 1. ಪ್ರತಿ ಬುಧವಾರ ಸಂಜೆ, ೬ ಗಂಟೆಗೆ, ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ವೇದಿಕೆಯ ಸಭಾಂಗಣದಲ್ಲಿ, ತಜ್ಞ ರಿಂದ ಜನಪ್ರಿಯ ಉಪನ್ಯಾಸಗಳು ಸತತವಾಗಿ ನಡೆದುಕೊಂಡು ಬರುತ್ತಿವೆ. ೨೦೦೪ ರ ನವೆಂಬರ್ ಕೊನೆಯ ಬುಧವಾರಕ್ಕೆ

ನಡೆಸಿದ ಒಟ್ಟು ಉಪನ್ಯಾಸಗಳ ಸಂಖ್ಯೆ ೧೯೬೯.

 1. ಪ್ರತಿ ತಿಂಗಳ ಒಂದು ಬುಧವಾರ ಸಂಜೆ, ವಿಜ್ಞಾನಿಕ ಚಿತ್ರ ಪ್ರದರ್ಶನ. ೨೦೦೪ ರ ನವೆಂಬರ್ ೩ ನೇ ತಾರೀಖಿನ ಪ್ರದರ್ಶನದ ಸಂಖ್ಯೆ, ೫೦೦ ನೇ, ಚಲನಚಿತ್ರ.
 2. ಜುಲೈ ತಿಂಗಳು ಒಂದು ತಿಂಗಳು ಪೂರ್ತಿ, ವಿಜ್ಞಾನೋತ್ಸವ ನಡೆಯುತ್ತದೆ. ದೇಶ ವಿದೇಶದ ಹೆಸರಾಂತ ವಿಜ್ಞಾನಿಗಳು ಉಪನ್ಯಾಸ ನೀಡುತ್ತಾರೆ. ಈ ವಿಜ್ಞಾನೋತ್ಸವ ಕಳೆದ ೨೭ ವರ್ಷಗಳಿಂದ, ನಡೆದುಕೊಂಡು ಬರುತ್ತಿದೆ.
 3. ಪ್ರತಿವರ್ಷ ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ ವಿಷಯಗಳನ್ನು ಕುರಿತು ಭಾಷಣ ಸ್ಪರ್ಧೆ ನಡೆಯುತ್ತದೆ.
 4. ಬೇಸಿಗೆ ರಜದಲ್ಲಿ ೭ ನೇ ತರಗತಿ ಮತ್ತು ೧೦ ನೇ ತರಗತಿ ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳಿಗಾಗಿ, ಬೇಸಿಗೆ ವಿಜ್ಞಾನ ಶಿಬಿರಗಳನ್ನು, ನಡೆಸುತ್ತಿದೆ.
 5. ಈ ವರ್ಷದಿಂದ, ಅಂದರೆ ಸನ್ 2004, ದಿಂದ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ನ ಸಹಯೋಗದಲ್ಲಿ ಅಖಿಲ ಕರ್ನಾಟಕ ವಿಜ್ಞಾನ ಮಾದರಿ ನಿರ್ಮಾಣ ಸ್ಪರ್ಧೆ ನಡೆಸಲಾಗುತ್ತದೆ.

ಬಹುಮಾನ, ಪುರಸ್ಕಾರ

 • ವೇದಿಕೆಯ ಕಾರ್ಯ ವೈಖರಿಯನ್ನು ಮೆಚ್ಚಿಕೊಂಡ ಭಾರತ ಸರ್ಕಾರ " ಜವಹರ್ಲಾಲ್ ನೆಹರೂ ರಾಷ್ಟ್ರೀಯ ಬಹುಮಾನ, " ನೀಡಿ ಗೌರವಿಸಿದೆ. ೨೦೦೨ ರಲ್ಲಿ ಈ ಬಹುಮಾನ ಲಭಿಸಿದೆ.
 • ೨೦೦೩ ರಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಮತ್ತು
 • ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಾ ಪರಿಷತ್ತುಗಳು ನೀಡುವ ರಾಷ್ಟ್ರೀಯ ಪುರಸ್ಕಾರ, ವಿಜ್ಞಾನ ವೇದಿಕೆಗೆ ದೊರೆತಿದೆ. ಈ ಎಲ್ಲಾ ಚಟುವಟಿಕೆಗಳ ಹಿಂದಿದ್ದ ಚೇತನ ಶ್ರೇಷ್ಟ ವಿಚಾರವಾದಿ ಮತ್ತು ಶಿಕ್ಷಣತಜ್ಞ, ಡಾ.ಎಚ್.ಎನ್. ಎಂದು ಬೇರೆ ಹೇಳಬೇಕಾಗಿಲ್ಲ !

ಕೃಪೆ : ಬೆಂಗಳೂರು ದರ್ಶನ, ಸಂಪುಟ ೧, ಮತ್ತು ೨, ಪುಟ, ೧೧೨.

The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.