ಯಲಹಂಕ

Jump to navigation Jump to search
ಯಲಹಂಕ
ಉಪನಗರ
Yelahanka
ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ,
ಯಲಹಂಕ is located in Karnataka
ಯಲಹಂಕ
ಯಲಹಂಕ
Location in Karnataka
Coordinates: 13°06′50″N 77°35′54″E / 13.11389°N 77.59833°E / 13.11389; 77.59833Coordinates: 13°06′50″N 77°35′54″E / 13.11389°N 77.59833°E / 13.11389; 77.59833
Country  India
State Karnataka
District Bangalore
Metro Bangalore
ಎತ್ತರ ೯೧೫
ಜನ ಸಂಖ್ಯೆ
 • ಒಟ್ಟು
Languages
 • Official Kannada
ಸಮಯ ವಲಯ IST (ಯುಟಿಸಿ+5:30)
PIN 560064,560106
Telephone code 91-80
ವಾಹನ ನೊಂದಣಿ KA 50

ಯಲಹಂಕ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಒಂದು ಪ್ರದೇಶ. ಮೂಲತಃ ಬೆಂಗಳೂರಿನ ಹೊರವಲಯದಲ್ಲಿದ್ದರೂ ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭಾಗವಾಗಿದೆ. ಬೆಂಗಳೂರಿನ ಹೃದಯ ಭಾಗದಿಂದ ೧೪ ಕಿಲೋಮೀಟರ್ ದೂರದಲ್ಲಿದೆ.

ಯಲಹಂಕ ಕರ್ನಾಟಕ ರಾಜ್ಯದ ಬೆಂಗಳೂರು ಉತ್ತರ ಜಿಲ್ಲೆಯಲ್ಲಿ, ಬೆಂಗಳೂರು-ಗುಂತಕಲ್ಲು ರೈಲು ಮಾರ್ಗದಲ್ಲಿರುವ ಐತಿಹಾಸಿಕ ಸ್ಥಳ. ಬೆಂಗಳೂರಿನಿಂದ ಉತ್ತರಕ್ಕೆ 16 ಕಿ.ಮೀ. ದೂರದಲ್ಲಿದೆ. ಚೋಳರ ಕಾಲದಲ್ಲಿ ಇದನ್ನು ಇಲೈಪಾಕ್ಕಂ ಮತ್ತು ಹೊಯ್ಸಳರ ಕಾಲದಲ್ಲಿ ಎಲಹಕ್ಕ ಎಂದೂ ಸುತ್ತಮುತ್ತಲಿನ ನಾಡನ್ನು ಯಲಹಂಕ ನಾಡು ಎಂದೂ ಕರೆಯಲಾಗುತ್ತಿತ್ತು.

ಇತಿಹಾಸ

1871ರವರೆಗೂ ತಾಲ್ಲೂಕು ಕೇಂದ್ರವಾಗಿದ್ದು ಈಗ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದೆ. ಇಲ್ಲಿ ಒಂದು ಪುರಸಭೆ ಇದೆ. ಬೆಂಗಳೂರಿನ ಸ್ಥಾಪಕ ಕೆಂಪೇಗೌಡನ ಮೂಲ ಪುರುಷನಾಗಿದ್ದ ಜಯದೇವಗೌಡ ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗಗಳನ್ನು ತನ್ನ ವಶಪಡಿಸಿಕೊಂಡು ಕೋಟೆ ಕೊತ್ತಳಗಳನ್ನು ಕಟ್ಟಿಸಿ ಆಡಳಿತ ವ್ಯವಸ್ಥೆ ಮಾಡಿದ. 1420ರಲ್ಲಿ ವಿಜಯನಗರ ಸಾಮ್ರಾಟರ ಆಶ್ರಯ ಪಡೆದ ಅನಂತರ ಯಲಹಂಕನಾಡ ಪ್ರಭು ಎಂಬ ಬಿರುದನ್ನು ಪಡೆದುಕೊಂಡ. ಈ ವಂಶದವರು ಸುಮಾರು 200 ವರ್ಷಗಳಷ್ಟು ದೀರ್ಘಕಾಲ ಯಲಹಂಕನಾಡನ್ನು ಆಳಿದರು. 1728ರಲ್ಲಿ ಮೈಸೂರಿನ ದಳವಾಯಿ ಈ ಪ್ರದೇಶವನ್ನು ಮೈಸೂರು ರಾಜ್ಯಕ್ಕೆ ಸೇರಿಸಿದ.

ಸ್ಥಳೀಯ ಆಕರ್ಷಣೆಗಳು

ಯಲಹಂಕದ ವೇಣುಗೋಪಾಲ ದೇವಾಲಯ ಪ್ರಸಿದ್ಧವಾದುದು. ವರ್ಷಂಪ್ರತಿ ಚೈತ್ರ ಶುದ್ಧ ಅಷ್ಟಮಿಯಂದು ನಡೆಯುವ ರಥೋತ್ಸವ ಸಾವಿರಾರು ಜನರನ್ನು ಆಕರ್ಷಿಸುತ್ತದೆ.

ಇದನ್ನೂ ನೋಡಿ

ಯಲಹಂಕದ ಪಾಳೆಯಗಾರರು

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಯಲಹಂಕ&oldid=816475" ಇಂದ ಪಡೆಯಲ್ಪಟ್ಟಿದೆ
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.