ಸ್ವರ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜೀವ ಸ್ವರ ಮತ್ತು ಧೀರ್ಘ ಸ್ವರ

ಸ್ವರವೆಂಬುದು ಭಾಷೆ, ವ್ಯಾಕರಣ ಮತ್ತು ಸಂಗೀತದಲ್ಲಿ ಕಂಡು ಬರುವ ಪದ. ಸಂಗೀತ ಕ್ಷೇತ್ರದಲ್ಲಿ ಸ್ವರ (ಸಂಗೀತ) ಎಂಬ ಪದ ಬಳಕೆಯಲ್ಲಿದೆ.

ಸ್ವರಾಕ್ಷರಗಳು ಎಂದರೇನು ?

ಕೇಶಿರಾಜ ಕನ್ನಡದಲ್ಲಿ ೧೪ ಸ್ವರಗಳಿವೆ ಎಂದು ಅಭಿಪ್ರಾಯಪಡುತ್ತಾನೆ.

 1. ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
 2. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.

ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,

ಌ - ಇದು 'ಲುೃ ಗೆ ಹತ್ತಿರದ ಉಚ್ಛಾರ ಹೊಂದಿದೆ

ವಿಧಗಳು

ಸ್ವರಗಳನ್ನು ನಾಲ್ಕು ವಿಭಾಗ ಮಾಡಬಹುದು.

 1. ಹ್ರಸ್ವಸ್ವರ
 2. ದೀರ್ಘಸ್ವರ
 3. ಸಂಧ್ಯಕ್ಷರ
 4. ಪ್ಲುತ

ಹ್ರಸ್ವಸ್ವರ

ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 - ಅ,ಇ,ಉ,ಋ,ಎ. ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ.

ದೀರ್ಘಸ್ವರ

ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 – ಆ,ಈ,ಊ.ಋೂ,ಏ. ಈ ಅಕ್ಷರಗಳನ್ನು ಗುರು(ವ್ಯಾಕರಣ) ಅಕ್ಷರಗಳು ಎಂದು ಕರೆಯುತ್ತಾರೆ.

ಸಂಧ್ಯಕ್ಷರ

 • ಮೂರು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 4 – ಏ,ಐ,ಓ,ಔ.
 • ಸಂಧ್ಯಕ್ಷರಗಳಲ್ಲಿ ಗೂಢಸಂಧಿಯಿದೆ.
  • =ಅ+ಇ;ಆ+ಈ;ಅ+ಈ;ಆ+ಇ,
  • =ಅ+ಉ;ಆ+ಊ,
  • =ಅ+ಏ,
  • =ಅ+ಒ.

ಪ್ಲುತ

ದೀರ್ಘಸ್ವರವನ್ನೇ ಇನ್ನೂ ಎಳೆದು ಉಚ್ಚರಿಸುವ ಅಕ್ಷರ. ಉದಾ: ಅಣ್ಣಾss, ತಮ್ಮಾss, ಹಾ! ರಾಮಾ! .

ಸವರ್ಣಗಳು

ಕೇಶಿರಾಜನು ಅ,ಆ - ಇ,ಈ - ಉ,ಊ - ಋ,ಋೂ - ಲುೃ,ಲೂೃ ಅಕ್ಷರಗಳ ಜೋಡಿಗಳನ್ನು ಸವರ್ಣ/ಸಮಾನಅಕ್ಷರಗಳೆಂದು ಕರೆದಿದ್ದಾನೆ. ಅಲ್ಲದೆಯೆ, ಎ,ಏ – ಒ,ಓ ಎಂಬ ಅಕ್ಷರಗಳು ಸವರ್ಣ/ಸಮಾನ ಅಕ್ಷರಗಳೆಂದು ಹೇಳಿ ಕನ್ನಡಕ್ಕೆ ವಿಶಿಷ್ಟವಾಗಿರುವ ಕೆಲವು ಅಕ್ಷರಗಳನ್ನು ಗುರುತಿಸಿದ್ದಾನೆ. ಅ. ಆ. ಎಂಬ ವರ್ಣದ ಹಿಂದನ ಸ್ವರಗಳು ‘ನಾಮಿ’ ಸಂಜ್ಞೆಯನ್ನು ಪೆಯುವುವು.

ಅನುಸ್ವಾರ ಮತ್ತು ವಿಸರ್ಗ

ಅನುಸ್ವಾರ ಮತ್ತು ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ವಂಜನಾಂಗವೆಂದೂ ಕರೆಯಲಾಗಿದೆ.

ಉಲ್ಲೇಖ

"https://kn.wikipedia.org/w/index.php?title=ಸ್ವರ&oldid=684240" ಇಂದ ಪಡೆಯಲ್ಪಟ್ಟಿದೆ
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.