ಹಾ.ಮಾ.ನಾಯಕ

Jump to navigation Jump to search
'ಹಾ.ಮಾ.ನಾಯಕ', ಮತ್ತು 'ಪು.ತಿ.ನ'

ಡಾ. ಹಾ.ಮಾ.ನಾಯಕ ಅವರ ದೃಷ್ಟಿಯಲ್ಲಿ- ಜ್ಞಾನ ನಿಂತ ನೀರಲ್ಲ, ಹರಿಯುವ ಹೊಳೆ. ಅದು ದಿನ ದಿನವೂ ನವೋನವವಾಗುತ್ತಿದೆ. ಜ್ಞಾನ ಬೆಳೆದಂತೆಲ್ಲ ವ್ಯವಸ್ಥೆಗೊಳ್ಳಬೇಕಾಗುತ್ತದೆ. ವ್ಯವಸ್ಥೆಗೊಂಡಾಗ ವಿಸ್ತರಣ ಸಂಶೋಧನೆ ಮತ್ತು ವ್ಯಾಸಂಗಗಳು ಸುಲಭವಾಗುತ್ತವೆ. ಅವರು ಕವಿ. ಅಂಕಣಕಾರ, ಭಾಷಾಶಾಸ್ತ್ರಜ್ಞ, ಜಾನಪದ ವಿದ್ವಾಂಸ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು.

ಜೀವನ

ಹಾ.ಮಾ.ನಾಯಕ [೧](೧೯೩೧-೨೦೦೦)-ಕನ್ನಡದ ಪ್ರಸಿದ್ಧ ಸಾಹಿತಿಗಳಲ್ಲೊಬ್ಬರು. ಹಾ ಮಾ ನಾ ಎಂದೇ ಪ್ರಸಿಧ್ಧರಾಗಿದ್ದ ಹಾ.ಮಾ.ನಾಯಕರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ೧೯೩೧ಸೆಪ್ಟೆಂಬರ್ ೧೨ರಂದು ಶಿವಮೊಗ್ಗ ಜೆಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ನಾಯಕ, ತಾಯಿ ರುಕ್ಮಿಣಮ್ಮ.

ವಿದ್ಯಾಭ್ಯಾಸ

ಮೇಗರವಳ್ಳಿ, ತೀರ್ಥಹಳ್ಳಿಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗದಲ್ಲಿ ಇಂಟರ್ ಮುಗಿಸಿದರು. ಮೈಸೂರು ಮಹರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಗಳಿಸಿದ ನಂತರ ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕರಾಗಿದ್ದು, ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾ ಲಯ ಸೇರಿದರು. ಮೈಸೂರು ವಿಶ್ವವಿದ್ಯಾನಿಲಯದ ವ್ಯಾಸಂಗ ವೇತನ ಪಡೆದು, ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞ್ನಾನದಲ್ಲಿ ಎಂ.ಎ. ಸ್ನಾತಕೋತ್ತರ ಪಡೆದರು. ಫುಲ್‍ಬ್ರೈಟ್ ವಿದ್ಯಾರ್ಥಿ ವೇತನ ಪಡೆದು, ಕನ್ನಡ ಸಾಹಿತ್ಯ ಮತ್ತು ಅಡು ಭಾಷೆ ಎಂಬ ಮಹಾ ಪ್ರಬಂಧವನ್ನು ಸಾದರ ಪಡಿಸಿ, ಅಮೆರಿಕಾಇಂಡಿಯಾನಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು.[೨]

ಕೃತಿಗಳು

ಅಂಕಣ ಬರಹಗಳು

  • ಸಂಪ್ರತಿ (ಅಂಕಣ ಬರಹಗಳು)
  • ಸಂಚಯ(ಅಂಕಣ ಬರಹಗಳು)
  • ಸಂಪದ(ಅಂಕಣ ಬರಹಗಳು)
  • ಸೂಲಂಗಿ(ಅಂಕಣ ಬರಹಗಳು)
  • ಸಂಪುಟ(ಅಂಕಣ ಬರಹಗಳು)

ಜೀವನ ಚರಿತ್ರೆಗಳು

  • ಅಕ್ಕ ಮಹಾದೇವಿ
  • ಬಸವ ಪುರುಷ
  • ಎ.ಆರ್.ಕೃ.ಜೀವನ ಸಾಧನೆ
  • ಮುದ್ದಣ
  • ರವೀಂದ್ರನಾಥ ಠಾಕೋರ್
  • ವಿನಾಯಕ ವಾಙ್ಮಯ
  • ದೇಜಗೌ ಮತ್ತು ವ್ಯಕ್ತಿ ಸಾಹಿತ್ಯ

ಇತರ ಕೃತಿಗಳು

  • ಬಾಳ್ನೋಟಗಳು
  • ಕನ್ನಡ ಸಾಹಿತ್ಯ ಚರಿತ್ರೆ (೫ ಸಂಪುಟಗಳು)
  • ನಮ್ಮ ಮನೆಯ ದೀಪ (ಪ್ರಬಂಧಗಳು)
  • ಹಾವು ಮತ್ತು ಹೆಣ್ಣು (ಕತೆಗಳು)
  • ಇಂಡಿಯಾ ದೇಶದ ಸಾರ್ವಜನಿಕ ಆಯ ವ್ಯಯ
  • ಗೊರೂರು ಗೌರವ ಗ್ರಂಥ
  • ಚಿನ್ನದ ಗರಿ
  • ಜಾನಪದ ಗ್ರಂಥಸೂಚಿ
  • ಬಿಡುಗಡೆಯ ಬಳ್ಳಿ
  • ಕಾವ್ಯ ಸಂಚಯ
  • ವಿಜ್ಞಾನ ಸಾಹಿತ್ಯ ನಿರ್ಮಾಣ
  • ಗದ್ಯ ವಿಹಾರ (೧ ಮತ್ತು ೨)

ಗೌರವ,ಪುರಸ್ಕಾರ

  • ಹದಿನಾರು ವರ್ಷಗಳ ಕಾಲ ಮೈಸೂರು ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು.
  • ೧೯೮೪ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.
  • ಸಣ್ಣ ಕಥೆ, ಪ್ರಬಂಧ, ವಿಮರ್ಶೆ, ವ್ಯಕ್ತಿಚಿತ್ರಗಳು,ಜಾನಪದ, ಅನುವಾದ, ಅಂಕಣ ಬರಹಗಳನ್ನು ರಚಿಸಿದ್ದಾರೆ.
  • ೧೯೮೫ರಲ್ಲಿ ಬೀದರ್ ನಲ್ಲಿ ನಡೆದ ಐವತ್ತೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿದ್ದರು.
  • ೧೯೮೨ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
  • ಹಾಮಾನಾಯಕರ ಸಂಪ್ರತಿ ಎಂಬ ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ೧೯೮೯ರಲ್ಲಿ ಪ್ರಶಸ್ತಿ ದೊರೆತಿದೆ. ಇದು ಕನ್ನಡದಲ್ಲಿ ಅಂಕಣ ಬರಹಗಳಿಗೆ ಸಂದ ಮೊಟ್ಟ ಮೊದಲನೆಯ ಗೌರವ.

ನಿಧನ

ಉಲ್ಲೇಖ

  1. 'ಕನ್ನಡದ ಮಾನ ಎತ್ತರಿಸಿದ ಹಾಮಾನಾ', ಬಿ ಎ.ವಿವೇಕ್ ರೈ, September 29, 2011
  2. EbOOK AND Texts> Universa Library>'EPIGRAPHIA CARNATICA VOL 3 (1974'
  3. Ha. Ma. Nayak's wife commits suicide, The Hindu, Friday, Jun 25, 2004
  4. One India(kannada) 'ಸಾಹಿತಿ ದಿ। ಹಾ.ಮಾ.ನಾಯಕ್‌ ಪತ್ನಿ ಯಶೋದಮ್ಮ ನಾಯಕ್‌ ಆತ್ಮಹತ್ಯೆ'November 24, 2001
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:


ಟೆಂಪ್ಲೇಟು:ಜನನ ನಿಧನ

The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.